Satyanarayana Swamy Vrita - ಶ್ರೀ ಸತ್ಯನಾರಾಯಣ ವ್ರತ

ಸ್ಕಾಂದ ಪುರಾಣದ ರೇವಾಖಂಡದ
ಶ್ರೀ ಸತ್ಯನಾರಾಯಣ ವ್ರತ ಕಥೆ
ಅಧ್ಯಾಯ ೧

ಹಿಂದೆ ನೈಮಿಶಾರಣ್ಯ ವಾಸಿಗಳಾದ ಋಷಿಗಳು ಸೂತ ಮಹರ್ಷಿಯನ್ನು ನೋಡಿ ಹೀಗೆ ಕೇಳಿದರು : "ಋಷಿವರ್ಯಾ, ಯಾವ
ವ್ರತ ಆಚರಣೆಯಿಂದ ಅಥವಾ ಯಾವ ತಪಸ್ಸಿನಿಂದ ಅಭೀಷ್ಟವನ್ನು
ಹೊಂದಬಹುದು ? ಆ ಸಮಸ್ತವನ್ನೂ ಕೇಳಲು ಅಪೇಕ್ಷಿಸುತ್ತಿರುವ ನಮಗೆ
ಕೃಪೆಯಿಂದ ಉಪದೇಶಿಸಿ'' ಎಂದರು. ಈ ರೀತಿ ಪ್ರಶ್ನೆ ಮಾಡಿದ ಶೌನಕಾದಿಗಳನ್ನು ಕುರಿತು ಸೂತರು ಹೇಳಿದರು :

"ಎಲೈ ಮುನಿಗಳಿರಾ ! ಆಲಿಸಿ. ಭಗವಂತನಾದ ಶ್ರೀಮನ್ನಾರಾಯಣನು ನಾರದರಿಂದ ಹಿಂದೆ ಇದೇ ರೀತಿ ಕೇಳಲ್ಪಟ್ಟವನಾಗಿ ದೇವರ್ಷಿಗಳಿಗೆ
ಯಾವುದನ್ನು ಹೇಳಿದರೋ ಆ ಸಮಸ್ತವನ್ನೂ ಹಾಗೆಯೇ ನುಡಿಯುವೆನು, ಸಾವಧಾನ ಚಿತ್ತರಾಗಿ ಕೇಳಿರಿ. ಲೋಕಾನುಗ್ರಹ ಮಾಡಬೇಕೆಂಬ ಬಯಕೆಯಿಂದ ನಾರದರು ಸಮಸ್ತ ಲೋಕಗಳನ್ನು ಸುತ್ತುತ್ತಾ ಭೂಲೋಕಕ್ಕೆ ಬಂದರು. ಆನಂತರ ಅಲ್ಲಿ ನಾನಾ ವಿಧವಾದ
ಕಷ್ಟಗಳಿಂದ ಕೂಡಿದಂಥಾ, ಅನೇಕ ಯೋನಿಗಳಲ್ಲಿ ಜನಿಸಿದ, ತಮ್ಮ ಪೂರ್ವಾರ್ಜಿತ ಕರ್ಮಫಲಗಳಿಂದ ಕಷ್ಟ ಪಡುತ್ತಾ ಇರುವ ಸಮಸ್ತ ಪ್ರಜೆಗಳನ್ನೂ ನೋಡಿ, ಈ ಲೋಕದ ದುಃಖ ಪರಿಹಾರವು ಯಾವ ಉಪಾಯದಿಂದ ನಿಶ್ಚಯವಾಗಿ ಉಂಟಾಗುವುದೋ ಎಂದು ತನ್ನ
ಮನಸ್ಸಿನಲ್ಲಿ ಯೋಚಿಸಿ ಆಗ ವೈಕುಂಠವನ್ನು ತಲುಪಿದರು.

ಅಲ್ಲಿ ಶುಭ್ರವರ್ಣ ಉಳ್ಳವನಾಗಿಯೂ, ನಾಲ್ಕು ತೋಳು ಉಳ್ಳವನಾಗಿಯೂ, ಶಂಖ ಗದಾ ಪದ್ಮ ವನಮಾಲಾದಿಗಳಿಂದ ಸುಶೋಭಿತನಾಗಿಯೂ ಇರುವ ಕಮಲಾಪತಿಯನ್ನು ಕಂಡು ಸ್ತುತಿಸುವುದಕ್ಕೆ ಪ್ರಾರಂಭಿಸಿದನು. "ಎಲೈ ಅನಂತವಾದ ಪರಾಕ್ರಮವುಳ್ಳ, ಮಾತು ಮನಸ್ಸುಗಳಿಗೆ ಅಗೋಚರವಾದ ಆಕಾರವುಳ್ಳ, ಆದಿಯೂ ಮಧ್ಯವೂ ಇಲ್ಲದಂಥಾ, ಗುಣಸ್ವರೂಪನು ಆದಂಥ, ಸಕಲಭೂತಗಳಿಗೂ
ಮೊದಲನೆಯವನು ಆದಂತಹ ಭಕ್ತ ಪಾಲಕನಾದ ಹೇ ಸ್ವಾಮಿಯೇ ! ನಿನಗೆ ಅನಂತ ನಮಸ್ಕಾರಗಳು.' ಹೀಗೆ ನಾರದರು ಸ್ತುತಿಸುತ್ತ ಇರುವುದನ್ನು ಕೇಳಿ ಶ್ರೀಮನ್ನಾರಾಯಣನು ಹೀಗೆಂದನು- "ಎಲೈ ನಾರದ ಮಹರ್ಷಿಯೇ ನಿನ್ನ ಮನಸ್ಸಿನಲ್ಲಿ ಏನಿದೆ ? ಏತಕ್ಕೋಸ್ಕರ ಬಂದಂಥವನಾದೆ ? ಅದನ್ನು ಹೇಳಿದೆಯಾದರೆ ನಿನಗೆ ತಕ್ಕ ಸಮಾಧಾನವನ್ನು ಹೇಳುವೆನು.' ಹೀಗೆ ಭಗವಂತನು ನುಡಿಯಲಾಗಿ, ನಾರದನು "ಎಲೈ ಭಕ್ತವತ್ಸಲನೇ, ಭೂಲೋಕದಲ್ಲಿ ಹುಟ್ಟಿದಂಥಾ ಸಕಲರಾದ ಮಾನವರೂ ತಮ್ಮ ತಮ್ಮ ಪಾಪ ಕರ್ಮಗಳಿಂದ ದಹಿಸಲ್ಪಡುತ್ತಿರುವರು. 'ಎಲೈ ಸ್ವಾಮಿಯೇ ಸುಲಭ ಉಪಾಯದಿಂದ ಲೋಕ ಸಂಕಟವು ಹೇಗೆ ಪರಿಹಾರ ಆಗುವುದೋ, ಆ ಸಮಸನನ್ನೂ ಕೇಳಲು ಅಪೇಕ್ಷಿಸುತ್ತಿರುವೆನು. ನನ್ನಲ್ಲಿ ನೀನು ದಯೆ ತೋರಿ ಹೇಳುವವನಾಗು' ಎಂದು ಪ್ರಾರ್ಥಿಸಿದರು.

ಈ ರೀತಿಯಾಗಿ ಕೇಳಿದ ನಾರದರನ್ನು ನೋಡಿ ಪರಮಾತ್ಮನು ಹೇಳಿದನು: "ಮಗು, ಪ್ರಪಂಚಾನುಗ್ರಹ ಆಕಾಂಕ್ಷೆಯುಳ್ಳ ನೀನು ಚೆನ್ನಾಗಿ ಕೇಳಿದೆ. ಯಾವ ಕರ್ಮವನ್ನು ಎಸಗಲು ಮನುಷ್ಯನು ಅಜ್ಞಾನದಿಂದ ಬಿಡಲ್ಪಟ್ಟು ವಿಮುಕ್ತನಾಗುವನೋ ಅಂತಹ ರಹಸ್ಯವನ್ನು ಹೇಳುವೆನು ಕೇಳು. ಸ್ವರ್ಗ ಮರ್ತ್ಯಲೋಕಗಳಲ್ಲಿ ದುರ್ಲಭವಾದ ಅತಿ ಪುಣ್ಯಕರವಾದ ಒಂದು ವ್ರತವುಂಟು. ಎಲೈ ಮಗುವೇ ! ನನಗೆ
ನಿನ್ನಲ್ಲಿರುವ ವಾತ್ಸಲ್ಯದಿಂದ ಅದನ್ನು ಪ್ರಕಾಶಪಡಿಸುವೆನು. ವಿಧ್ಯುಕ್ತವಾಗಿ ಸ್ವಲ್ಪವೂ ಲೋಪವಿಲ್ಲದಂತೆ ಸತ್ಯನಾರಾಯಣ
ವ್ರತವನ್ನು ಮಾಡಿದಲ್ಲಿ ಇಹಲೋಕದಲ್ಲಿ ಸಮಸ್ತ ಸುಖವನ್ನು  ಅನುಭವಿಸಿ ಪರಲೋಕದಲ್ಲಿ ಮುಕ್ತಿಯನ್ನು ಹೊಂದುವರು' ಎಂದನು.

ಹೀಗೆ ನುಡಿದ ಭಗವದ್ ವಾಕ್ಯವನ್ನು ಆಲಿಸಿ ನಾರದ ಮಹರ್ಷಿಯು ಹೀಗೆಂದರು -  ಎಲೈ  ಜಗದೊಡೆಯನೇ ! ಈ ಸತ್ಯನಾರಾಯಣ ವ್ರತದ ಫಲವೇನು ಮತ್ತು ಇದರ ವಿಧಾನವೇನು ಯಾರಿಂದ ಪೂರ್ವದಲ್ಲಿ

     

 

Popular posts from this blog

ಸುಖಕರ್ತ ದುಖಹರ್ತ / सुखकर्ता दुखहर्ता

ಆತ್ಮಾರಾಮ ಆನಂದ ರಮಣ / athma Rama Aanandha Ramana

ಮಂತ್ರ ಪುಷ್ಪಂ / Mantra Pushpam