Posts

Showing posts with the label ಶ್ರೀ ಸತ್ಯನಾರಾಯಣ ವ್ರತ

Satyanarayana Swamy Vrita - ಶ್ರೀ ಸತ್ಯನಾರಾಯಣ ವ್ರತ

ಸ್ಕಾಂದ ಪುರಾಣದ ರೇವಾಖಂಡದ ಶ್ರೀ ಸತ್ಯನಾರಾಯಣ ವ್ರತ ಕಥೆ ಅಧ್ಯಾಯ ೧ ಹಿಂದೆ ನೈಮಿಶಾರಣ್ಯ ವಾಸಿಗಳಾದ ಋಷಿಗಳು ಸೂತ ಮಹರ್ಷಿಯನ್ನು ನೋಡಿ ಹೀಗೆ ಕೇಳಿದರು : "ಋಷಿವರ್ಯಾ, ಯಾವ ವ್ರತ ಆಚರಣೆಯಿಂದ ಅಥವಾ ಯಾವ ತಪಸ್ಸಿನಿಂದ ಅಭೀಷ್ಟವನ್ನು ಹೊಂದಬಹುದು ? ಆ ಸಮಸ್ತವನ್ನೂ ಕೇಳಲು ಅಪೇಕ್ಷಿಸುತ್ತಿರುವ ನಮಗೆ ಕೃಪೆಯಿಂದ ಉಪದೇಶಿಸಿ'' ಎಂದರು. ಈ ರೀತಿ ಪ್ರಶ್ನೆ ಮಾಡಿದ ಶೌನಕಾದಿಗಳನ್ನು ಕುರಿತು ಸೂತರು ಹೇಳಿದರು : "ಎಲೈ ಮುನಿಗಳಿರಾ ! ಆಲಿಸಿ. ಭಗವಂತನಾದ ಶ್ರೀಮನ್ನಾರಾಯಣನು ನಾರದರಿಂದ ಹಿಂದೆ ಇದೇ ರೀತಿ ಕೇಳಲ್ಪಟ್ಟವನಾಗಿ ದೇವರ್ಷಿಗಳಿಗೆ ಯಾವುದನ್ನು ಹೇಳಿದರೋ ಆ ಸಮಸ್ತವನ್ನೂ ಹಾಗೆಯೇ ನುಡಿಯುವೆನು, ಸಾವಧಾನ ಚಿತ್ತರಾಗಿ ಕೇಳಿರಿ. ಲೋಕಾನುಗ್ರಹ ಮಾಡಬೇಕೆಂಬ ಬಯಕೆಯಿಂದ ನಾರದರು ಸಮಸ್ತ ಲೋಕಗಳನ್ನು ಸುತ್ತುತ್ತಾ ಭೂಲೋಕಕ್ಕೆ ಬಂದರು. ಆನಂತರ ಅಲ್ಲಿ ನಾನಾ ವಿಧವಾದ ಕಷ್ಟಗಳಿಂದ ಕೂಡಿದಂಥಾ, ಅನೇಕ ಯೋನಿಗಳಲ್ಲಿ ಜನಿಸಿದ, ತಮ್ಮ ಪೂರ್ವಾರ್ಜಿತ ಕರ್ಮಫಲಗಳಿಂದ ಕಷ್ಟ ಪಡುತ್ತಾ ಇರುವ ಸಮಸ್ತ ಪ್ರಜೆಗಳನ್ನೂ ನೋಡಿ, ಈ ಲೋಕದ ದುಃಖ ಪರಿಹಾರವು ಯಾವ ಉಪಾಯದಿಂದ ನಿಶ್ಚಯವಾಗಿ ಉಂಟಾಗುವುದೋ ಎಂದು ತನ್ನ ಮನಸ್ಸಿನಲ್ಲಿ ಯೋಚಿಸಿ ಆಗ ವೈಕುಂಠವನ್ನು ತಲುಪಿದರು. ಅಲ್ಲಿ ಶುಭ್ರವರ್ಣ ಉಳ್ಳವನಾಗಿಯೂ, ನಾಲ್ಕು ತೋಳು ಉಳ್ಳವನಾಗಿಯೂ, ಶಂಖ ಗದಾ ಪದ್ಮ ವನಮಾಲಾದಿಗಳಿಂದ ಸುಶೋಭಿತನಾಗಿಯೂ ಇರುವ ಕಮಲಾಪತಿಯನ್ನು ಕಂಡು ಸ್ತುತಿಸುವುದಕ್ಕೆ ಪ್ರಾರಂಭಿಸಿದನು. ...