ತರೀಕೆರೆ ಮುದುಕ - Tarikere Muduka

ತರೀಕೆರೆ ಮುದುಕ ಸಂತೆಗೆ ಹೋದನು॥ 
ತರೀಕೆರೆ ಮುದುಕ, ಮುದುಕನ ಹೆಂಡತಿ, ಸಂತೆಗೆ ಹೋದರು॥

ತರೀಕೆರೆ ಮುದುಕ, ಮುದುಕನ ಹೆಂಡತಿ,
ಹೆಂಡತಿಯ ಮಗಳು ಸಂತೆಗೆ ಹೋದಳು॥

ತರೀಕೆರೆ ಮುದುಕ, ಮುದುಕನ ಹೆಂಡತಿ, ಹೆಂಡತಿಯ ಮಗಳು, ಮಗಳ ಗಂಡ ಸಂತೆಗೆ ಹೋದರು॥

ತರೀಕೆರೆ ಮುದುಕ, ಮುದುಕನ ಹೆಂಡತಿ, ಹೆಂಡತಿಯ ಮಗಳು, ಮಗಳ ಗಂಡ, ಗಂಡನ ನಾಯಿ ಸಂತೆಗೆ ಹೋಯಿತು॥

ತರೀಕೆರೆ ಮುದುಕ, ಮುದುಕನ ಹೆಂಡತಿ, ಹೆಂಡತಿಯ ಮಗಳು, ಮಗಳ ಗಂಡ, ಗಂಡನ ನಾಯಿ, ನಾಯಿಯ ಬಾಲ ಸಂತೆಗೆ ಹೋಯಿತು॥

ತರೀಕೆರೆ ಮುದುಕ, ಮುದುಕನ ಹೆಂಡತಿ, ಹೆಂಡತಿಯ ಮಗಳು, ಮಗಳ ಗಂಡ, ಗಂಡನ ನಾಯಿ, ನಾಯಿಯ ಬಾಲ, ಬಾಲದ ತುದಿಯು ಸಂತೆಗೆ ಹೋಯಿತು॥

ತರೀಕೆರೆ ಮುದುಕ, ಮುದುಕನ ಹೆಂಡತಿ,

ಹೆಂಡತಿಯ ಮಗಳು, ಮಗಳ ಗಂಡ, ಗಂಡನ ನಾಯಿ, ನಾಯಿಯ ಬಾಲ, ಬಾಲದ ತುದಿಯು, ತುದಿಯ ಹೇನು ಸಂತೆಗೆ ಹೋಯಿತು॥

Popular posts from this blog

ಸುಖಕರ್ತ ದುಖಹರ್ತ / सुखकर्ता दुखहर्ता

ಗಣನಾಯಕಾಯ ಗಣದೈವತಾಯ /Gananayakaya

ಆತ್ಮಾರಾಮ ಆನಂದ ರಮಣ / athma Rama Aanandha Ramana