ಎಲ್ಲೋ ಹುಡುಕಿದೆ ಇಲ್ಲದ ದೇವರ - Ellō huḍukide illada dēvara

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ


ಕವಿ: ಜಿ ಎಸ್ ಶಿವರುದ್ರಪ್ಪ
ಸಂಗೀತ: ಸಿ ಅಶ್ವಥ್
ದ್ವನಿಸುರುಳಿ: ಚೈತ್ರ
ಗಾಯಕರು: ಸಿ ಅಶ್ವಥ್

Popular posts from this blog

ಸುಖಕರ್ತ ದುಖಹರ್ತ / सुखकर्ता दुखहर्ता

ಆತ್ಮಾರಾಮ ಆನಂದ ರಮಣ / athma Rama Aanandha Ramana

ಮಂತ್ರ ಪುಷ್ಪಂ / Mantra Pushpam