Posts

Showing posts with the label ಲಕ್ಷ್ಮೀ

Vaibhava Lakshmi Vrita - ವೈಭವ ಲಕ್ಷ್ಮಿ ವ್ರತ

ಪ್ರಸನ್ನ ವೈಭವ ಲಕ್ಷ್ಮಿ   ಶ್ರೀ ಪ್ರಸನ್ನ ವೈಭವ ಲಕ್ಷ್ಮೀ ವ್ರತ ಹಾಗೂ ಪೂಜಾ ವಿಧಾನ (ಪೂಜಾ ವಿಧಾನ, ನಿಯಮ, ಕ್ರಮ ಹಾಗೂ ಮಹಿಮೆಗಳನ್ನೊಳಗೊಂಡಿದೆ) ಪ್ರಕಾಶಕರು : ಶ್ರೀ ಸರಸ್ವತೀ ರತ್ನಾಕರ ಬುಕ್ ಡಿಪೋ 618, ರಾಜೇಶ್ವರಿ ಮಾರ್ಕೆಟ್, ಅವೆನ್ಯೂ ರಸ್ತೆ, ಬೆಂಗಳೂರು-560 002 ಫೋನ್ : 2262303   ಶ್ರೀ ಪ್ರಸನ್ನ ವೈಭವಲಕ್ಷ್ಮೀ ಪೂಜಾವಿಧಾನ  ಜಗನ್ಮಾತೆಯೂ, ಮೂಲ ಪ್ರಕೃತಿಯ ಸ್ವರೂಪಿಣಿಯೂ, ಧನ-ಧಾನ್ಯ ಸಂಪತ್ತುಗಳನ್ನು ಕರುಣಿಸುವ ಐಶ್ವರ್ಯ ಅಧಿದೇವತೆಯಾದ ಶ್ರೀ ಮಹಾಲಕ್ಷ್ಮಿಯ ಪೂಜೆ ವೇದ ಕಾಲದಿಂದಲೂ ನಡೆದು ಬಂದಿದೆ. ಶ್ರೀಸೂಕ್ತವೂ ಲಕ್ಷ್ಮಿಯನ್ನು ಹಿರಣ್ಯವರ್ಣಾ ಎಂದೇ ಬಣ್ಣಿಸುತ್ತದೆ. ದಿವ್ಯ ತೇಜೋಮಯವಾದ ಶರೀರದ, ಸಕಲ ಸೌಭಾಗ್ಯ ದೇವತೆಯಾದ ಶ್ರೀ ಮಹಾಲಕ್ಷ್ಮಿಯ ರೂಪ ನಾಮಗಳು ಹಲವು. ಈ ಮಹಾಲಕ್ಷ್ಮಿಯ ಅನುಗ್ರಹವಿಲ್ಲದೆ ಜೀವನ ಸುಖಮಯವಾಗಲಾರದು. ಆದ್ದರಿಂದಲೇ ಹಿರಿಯರು “ಅರ್ಥಾ: ಬಹಿಶ್ವರಾ ಪ್ರಾಣಾಃ” ಎಂದರೆ ಹಣವು ನಮ್ಮ ಶರೀರದ ಹೊರಗೆ ತಿರುಗಾಡುವ ಪ್ರಾಣ ಎಂದಿದ್ದಾರೆ. ಹಣವಿಲ್ಲದವನ ಬಾಳು ತುಂಬ ಕಷ್ಟಕರ. ಈಗಿನ ಕಾಲದಲ್ಲಂತೂ ಹಣವಿಲ್ಲದೆ ಅರೆ ಘಳಿಗೆಯೂ ಬದುಕು ಸಾಗಿಸುವುದು ಕಷ್ಟ. ಹೀಗಾಗಿ ಎಲ್ಲರಿಗೂ ನಾವು ಹಣಗಳಿಸೋಣ, ಸ್ಥಿತಿವಂತರಾಗೋಣ, ಎಂಬ ಬಯಕೆ ತುಂಬಾ ಸಹಜವಾಗಿರುತ್ತದೆ. ಹಣವೇ ಜೀವನದ ಸರ್ವಸ್ವವಲ್ಲ; ಆದರೆ ಹಣವಿಲ್ಲದ ಬಾಳು ದುರ್ಭರವಾಗುತ್ತದೆ. ಹಣವನ್ನು ಒಳ್ಳೆಯ ರೀತಿ ಸಂಪಾದನೆ ಮಾಡಿ ಸದ್ವಿನಿಯೋಗ ಮಾಡಿದರೆ ಬಾಳು ಸಾರ್ಥಕವಾಗ...